kannada

ದೂರದ ಅಮೇರಿಕಾದಲ್ಲಿ ಮಿಂಚುತ್ತಿರುವ ಕನ್ನಡ ನಾಡಿನ ಅಪ್ಪಟ ಪ್ರತಿಭೆ ಭರತನಾಟ್ಯ ವಿದುಷಿ ಮೇಘಾ ಪಿ ರಾವ್

ಲೇಖಕರು: ಡಾ. ಕರುಣಾಕರ್ ಎನ್ ಶೆಟ್ಟಿ ಪಣಿಯೂರು.

ಮೇಘಾ ರಾವ್ ಅವರು ಕಳೆದ ೨೦ ವರುಷಗಳಿಂದಲೂ ಅಧಿಕ ಭರತನಾಟ್ಯವನ್ನು ಪ್ರದರ್ಶಿಸುವ ಅದೇರೀತಿ ಕಲಿಸುವ ಕಾಯಕದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ತಮ್ಮ ಮಾಧ್ಯಮಿಕ ಶಾಲಾ ದಿನಗಳಿಂದಲೆ ಭರತ ನಾಟ್ಯ ಕಲೆಯಲ್ಲಿ ಪರಿಣತಿ ಹೊಂದಿದ್ದು, ಅವರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡವರು . ದೂರದ ರಾಷ್ಟ್ರೀಯ ದೂರದರ್ಶನ ಚಾನೆಲ್ನಲ್ಲಿ ಅವರು ಕಾರ್ಯಕ್ರಮ ನೀಡಿರುತ್ತಾರೆ.ಸದ್ಯ ಅಮೇರಿಕಾದಲ್ಲಿ ನೆಲೆ ನಿಂತಿರುವ ಅವರು ಅಲ್ಲಿ “ಧೀರನಾ” ಅಕಾಡೆಮಿ ಆಫ್ ಕ್ಲಾಸಿಕಲ್ ಡ್ಯಾನ್ಸನ ಏಕ ಮಾತ್ರ ನಿರ್ದೇಶಕರಾಗಿ ಸುಮಾರು ನೂರಕ್ಕಿಂತಲೂ ಅಧಿಕ ವಿದ್ಯಾರ್ಥಿಗಳನ್ನು ವರ್ಷವೊಂದಕ್ಕೆ ತರಬೇತುಗೊಳಿಸುತ್ತಾರೆ.

೨೦೧೧ರಲ್ಲಿ ಇವರು ಅಮೇರಿಕಾದ ಬೆಂಟೊವಿಲ್ಲೆ ಅರ್ಕಾನ್ಸಸ್ ನಲ್ಲಿ “ಸರ್ ಗಮ್ “ನೃತ್ಯ ಪ್ರದರ್ಶನ ನೀಡಿ ಪ್ರೇಕ್ಷಕರ ಮನಸೂರೆಗೊಂಡಿದ್ದಾರೆ. ಅಲ್ಲಿ ನಿರಂತರ ನೃತ್ಯ ಪ್ರದರ್ಶನ ಹಾಗೂ ಅಯೋಜನೆಯನ್ನು ಮಾಡಿಕೊಂಡು ಬರುತ್ತಿರುವ ಶ್ರೇಯ ಇವರದು.

ಇವರು ಮಾಡಿರುವ ಮಹತ್ವದ ಕೆಲವು ಕಾರ್ಯಗಳು ಹೀಗಿವೆ..ಪ್ರತಿವರ್ಷ ನೃತ್ಯ ಪ್ರದರ್ಶನಗಳನ್ನು ಅಯೊಜಿಸಿಕೊಂಡು ಬರುತ್ತಿದ್ದು ಈ ಮೂಲಕ ಯುವ ಪ್ರತಿಭೆಗಳಿಗೆ ದೊಡ್ಡ ವೇದಿಕೆಗಳಲ್ಲಿ ಪ್ರದರ್ಶನ ನೀಡುವಲ್ಲಿ ಸಹಕರಿಸುತ್ತಿದ್ದಾರೆ.

ಅವರು ನುರಿತ ಶಿಷ್ಯರಿಂದ ೨-೩ ಗಂಟೆಯ ಆರಂಗೇಟ್ರಂ ಅಯೋಜಿಸುತ್ತಾ ಬರುತ್ತಿದ್ದಾರೆ. ವಿದುಷಿ ಮೇಘಾ ಅವರು ಶಾಲೆ ಮತ್ತು ಇತರ ಸಾಮಾಜಿಕ ಸಂಸ್ಥೆಗಳ ಸಹಕಾರದಿಂದ ನೃತ್ಯವನ್ನು ಕಲಿಸಿ, ಅಲ್ಲೂ ನೃತ್ಯದಲ್ಲಿ ಮಕ್ಕಳಲ್ಲಿ ಆಸಕ್ತಿ ಕುದುರಿಸುವ ಕಾರ್ಯ ಮಾಡುತ್ತಿದ್ದಾರೆ.

ಅಮೇರಿಕಾದ ಕ್ಲಾಸಿಕಲ್ ಬ್ಯಾಲೆಯೊಂದಿಗೆ ಭರತನಾಟ್ಯವನ್ನು ಸಮೀಕರಿಸಿ ಆ ನಿಟ್ಟಿನಲ್ಲಿ ಭರತನಾಟ್ಯ ಕಲೆಯನ್ನು ಅಮೇರಿಕಾದಾದ್ಯಂತ ಪಸರಿಸುವ ಸ್ತುತ್ಯ ಕಾರ್ಯವನ್ನು ಅವರು ಮಾಡುತ್ತಾ ಬರುತ್ತಿದ್ದಾರೆ.

ಅವರ ಉಲ್ಲೇಖಿಸ ಬಹುದಾದ ಕೆಲವು ಸಾಧನೆಗಳು ನಮ್ಮ ದೇಶದ ರಾಷ್ಟ್ರೀಯ ದೂರದರ್ಶನದಲ್ಲಿ ಗುರುತಿಸಲ್ಪಟ್ಟ ಕಲಾವಿದರಾಗಿಹೆಸರಾದವರು.ರಾ.ವೆ ಸಾಂಸ್ಕೃತಿಕ ಪೌಂಡೇಶನ್ ಅಯೋಜಿಸಿದ “ನವರಸ ಮಾರ್ಗಂ” ಪ್ರೋಗ್ರಾಂ ನ ಕೊರಿಯೋಗ್ರಾಫರ್ ಆಗಿಯೂ ಕಾರ್ಯ ನಿರ್ವಹಿಸಿ ಸೈಯೆನಿಸಿಕೊಂಡಿದ್ದಾರೆ.ಧೀರನಾ ಅಕಾಡೆಮಿಯನ್ನು ಸ್ಥಾಪಿಸಿ ನೂರಕ್ಕೂ ಅಧಿಕ ಶಿಷ್ಯಂದಿರಿಗೆ ಭರತನಾಟ್ಯ ಕಲಿಸಿ ಅವರನ್ನು ಸ್ಪರ್ಧೆಗೂ ತಯಾರುಗೊಳಿಸಿರುವ ಖ್ಯಾತಿ ಇವರದು.ಆಗಾಗ ಪ್ರದರ್ಶನವನ್ನು ಅಯೋಜಿಸಿ ಉದಯೋನ್ಮುಖ ಕಲಾವಿದರಿಗೆ ಅವಕಾಶವನ್ನು ಒದಗಿಸುವ ಕಾರ್ಯ ನಿರ್ವಹಿಸುತ್ತಿದ್ದಾರೆ.

೧೯೯೬ ರಿಂದ ಸಾವಿರಕ್ಕಿಂತಲೂ ಅಧಿಕ ಪ್ರದರ್ಶನವನ್ನು ಭಾರತ ಹಾಗೂ ಹೊರದೇಶದಲ್ಲಿ ಪ್ರದರ್ಶನ ನೀಡಿರುವ ಇವರು ತಮ್ಮ ಅಮೋಘ ಸಾಧನೆಗಾಗಿ ಪ್ರಸಿದ್ಧಿ ಪಡೆದಿದ್ದಾರೆ.ಇವರ ಪ್ರದರ್ಶನಗಳಲ್ಲಿ ನೃತ್ಯೋತ್ಸವ- ಮುಂಬಯಿ, ವೆಸ್ಟ್ ಬೆಂಗಾಳ್ ಟೂರಿಸಂ ಫೆಸ್ಟಿವಲ್ ಕಲ್ಕತ್ತಾ , ಪಲ್ಲವೋತ್ಸವ- ಮೈಸೂರು , ನವರಸಪುರ್ ಉತ್ಸವ-ಬಿಜಾಪುರ್, ಹಂಪಿ ಉತ್ಸವ್, ಇಂಡಿಯಾ ಫೆಸ್ಟ್ -ಲಿಟ್ಟ್ ಲ್ ರಾಕ್ , ೨೧ನೆಯ ತಾನ ಕಾನ್ಫರೆನ್ಸ್ -ಸೈಂಟ್ ಲೂಯಿಸ್ ಇತ್ಯಾದಿ ಅವರಿಗೆ ತುಂಬಾ ಪ್ರಸಿದ್ಧಿ ತಂದಿತ್ತಿದೆ.

ಅವರಿಗೆ ದೊರೆತ ಕೆಲವು ಪ್ರಶಸ್ತಿ ಮತ್ತು ಗೌರವಗಳು..
೧. ತಮಿಳು ಕಮ್ಯೂನಿಟಿ ನಾರ್ತ್ ವೆಸ್ಟ್ ಆರ್ಕಾನಾಸ್ ಯು.ಎಸ್.ಎ.
೨. ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕರ್ನಾಟಕ.
೩. ಆರ್ಯಭಟ ಪ್ರಶಸ್ತಿ , ಬೆಂಗಳೂರು ೨೦೦೬.
೪. ಉಗಾದಿ ಪುರಸ್ಕಾರ ೨೦೦೪ , ಚೈತನ್ಯ ಬಳಗ ಮಂಡ್ಯ. ಗೌರವಗಳು..
೧. ಕರಾವಳಿ ಸಾಂಸ್ಕೃತಿಕ ಸಂಘ ಮಂಡ್ಯದ ಗೌರವ
೨. ಶಿವಸೇನಾ ಕರ್ನಾಟಕ ಮಂಡ್ಯ ವಸಂತೋತ್ಸವ ಗೌರವ ೨೦೦೪.
೩. ಶ್ರೀ ರಂಜಿನಿ ಕಲಾವೇದಿಕೆ ಮಂಡ್ಯ ಉಗಾದಿ ಪುರಸ್ಕಾರ, ೨೦೦೧
೪. ಚೈತನ್ಯ ಬಳಗ ೨೦೦೬
೫. ಪ್ರತಿಭಾ ಸಂಜೆ ೨೦೦೫ ಅಖಿಲ ಕರ್ನಾಟಕ ಕರಾವಳಿ ಸಾಂಸ್ಕೃತಿಕ ಒಕ್ಕೂಟ.
೬. ಕನ್ನಡ ಭಾರತಿ -೨೦೦೬
೭. ಮಂಡ್ಯ ಜಿಲ್ಲಾ ಬ್ರಾಹ್ಮಣ ಸಭಾ-೨೦೦೨
೮. ಗುರುದೇವ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ..ಇತ್ಯಾದಿ.